ಮೊಜಾಂಬಿಕ್
ಆಫ್ರಿಕ ಖಂಡದ ಒಂದು ಗಣರಾಜ್ಯ. ಈ ರಾಜ್ಯ ಆಫ್ರಿಕ ಖಂಡದ ಆಗ್ನೇಯದಲ್ಲಿ ಉತ್ತರ ದಕ್ಷಿಣವಾಗಿ ಹರಡಿದೆ.  ಇದರ ಪೂರ್ವಕ್ಕೆ ಹಿಂದೂಸಾಗರ; ದಕ್ಷಿಣಕ್ಕೆ ದಕ್ಷಿಣ ಆಫ್ರಿಕ; ನೈಋತ್ಯಕ್ಕೆ ಸ್ವಾಜೀಲ್ಯಾಂಡ್, ಪಶ್ಚಿಮಕ್ಕೆ ದಕ್ಷಿಣ ಮತ್ತು ಜಿûಂಬಾಬ್ವೇ ಹಾಗೂ ಉತ್ತರಕ್ಕೆ ಮಲಾವೀ, eóÁಂಬಿಯ ಮತ್ತು ಟ್ಯಾಂಜನೀಯ ಇದರ ಮೇರೆಗಳಾಗಿವೆ.  ಒಟ್ಟು ವಿಸ್ತೀರ್ಣ 783.030 ಚಕಮೀ, ಜನಸಂಖ್ಯೆ 180.30,000 (1997). ರಾಜಧಾನಿ ಮಪೂಟೊ.

	ಭೌತಲಕ್ಷಣ : ಮೊಜಾಂಬಿಕ್ ಹಿಂದೂಸಾಗರದ (2504) ಕಿಮೀ) ದೀರ್ಘ ತೀರಪ್ರದೇಶವನ್ನು  ಹೊಂದಿದೆ.   ಈ ತೀರಪ್ರದೇಶದ ಉದ್ದಕ್ಕೂ ಸುಮಾರು 50 ದೊಡ್ಡ ಮತ್ತು ಸಣ್ಣ ನದಿಗಳು ಸಮುದ್ರ ಸೇರುತ್ತವೆ.  ಈ ನದಿಗಳ ಹರಿವಿನಿಂದಾಗಿ ತೀರಪ್ರದೇಶ ವಿಸ್ತಾರವಾದ ಬಯಲುಗಳಿಂದ  ಕೂಡಿದ್ದು ಫಲವತ್ತಾಗಿದೆ.  ದಕ್ಷಿಣದಿಂದ eóÁಂಬೀಜೀ ನದಿಯವರೆಗೂ ತೀರಪ್ರದೇಶ ಹೆಚ್ಚಾಗಿ ಮರಳಿನಿಂದ ಕೂಡಿದೆ.  ಅಲ್ಲಿ ಜೌಗುಪ್ರದೇಶಗಳು ಕಂಡುಬರುತ್ತವೆ.  eóÁಂಬೀಜಿûೀಯ ಉತ್ತರಕ್ಕೆ ಅಲ್ಲಲ್ಲಿ ಕಲ್ಲಿನ ಬೆಟ್ಟಗಳು ಎದ್ದಿವೆ.  ಮೊಜಾಂಬಿಕ್ ಕೆಲಮಾನೀ ಬೇರೆ ಮತ್ತು ಮಪೂಟೊ ದೊಡ್ಡ ಬಂದರುಗಳು.   ಇಂದು ಮಪೂಟೊ ಎಂದು ಹೆಸರು ಪಡೆದಿರುವ ಬಂದರು ಮತ್ತು ರಾಜಧಾನಿಗೆ  ಪೋರ್ಚುಗೀಸರು ಲರೆನ್ಸೋ ಮಾರ್ಕೆಸ್ ಎಂದು ಕರೆದಿದ್ದರು.  ಇದು ದೆಲಾಗ ಕೊಲ್ಲಿಯಲ್ಲಿದ್ದು ಪ್ರಪಂಚದ ಅತ್ಯಂತ ಸ್ವಾಭಾವಿಕ ಬಂದರುಗಳಲ್ಲಿ ಒಂದಾಗಿದೆ.  ಮೊಜಾಂಬಿಕ್‍ನ ಉತ್ತರ ತುದಿಗೆ ಸಮಾಂತರವಾಗಿ ಹಿಂದೂ ಸಾಗರದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಸುಮಾರು 970 ಕಿಮೀ ಉದ್ದದ ಮಡಗಾಸ್ಕರ್ ದ್ವೀಪ ಹಬ್ಬಿದೆ.  ಇವೆರಡರ ನಡುವೆ ಸುಮಾರು 384 ಕಿಮೀ ಅಗಲದ ಮೊಜಾಂಬಿಕ್ ಜಲಸಂಧಿಯಿದೆ.

	ತೀರದಿಂದ ಒಳನಾಡಿನತ್ತ ಸರಿದಂತೆ ಭೂಮಿ ಎತ್ತರವಾಗುತ್ತ ಹೋಗುತ್ತದೆ.  ಸುಮಾರು 229 ಮೀಟರುಗಳ ಎತ್ತರವಿರುವ ತೀರದ ಬಯಲುಗಳು ದಕ್ಷಿಣದಲ್ಲಿ ಅಗಲವಾಗಿಯೂ ಉತ್ತರಕ್ಕೆ ಹೋದಂತೆ ಕಿರಿದಾಗಿಯೂ ಇವೆ.  ಇವು ವ್ಯವಸಾಯಕ್ಕೆ ಯೋಗ್ಯವಾಗಿವೆ.   ನದಿಗಳಿಂದುಂಟಾದ ಕಣಿವೆಗಳು ಮತ್ತು ತಗ್ಗಾದ ಬೆಟ್ಟಗಳು ಇಲ್ಲಿಯ ಪ್ರಧಾನ ಭೂಲಕ್ಷಣ.  eóÁಂಬೀಜಿûೀನದಿಯ ಉತ್ತರದ ಒಳನಾಡಿನಲ್ಲಿ ಸವನ್ನಾ ಮಾದರಿಯ ಹುಲ್ಲುಗಾವಲು ಕಂಡುಬರುತ್ತವೆ.

	ಈ ಬಯಲುಗಳ ಪಶ್ಚಿಮಕ್ಕೆ ಸರಿದಂತೆ ಸಿಗುವ ಪ್ರಸ್ಥಭೂಮಿಯ   ಎತ್ತರ ಸುಮಾರು 150-610 ಮೀ ಇದೆ.  ಆಫ್ರಿಕದ ಮುಖ್ಯ ಪ್ರಸ್ಥಭೂಮಿಯ ಅಂಚು ಮೊಜಾಂಬಿಕ್‍ನ ಪಶ್ಚಿಮ ಗಡಿಯುದ್ದಕ್ಕೂ ಹಬ್ಬಿದೆ.  ಜಿûಂಬಾಬ್ವೇ ಮತ್ತು ಮಲಾವೀ ಗಡಿಗಳಲ್ಲಿ ಬೆಟ್ಟ ಶೇಣಿಗಳು ಎತ್ತರವಾಗಿವೆ.  ಮಲಾವೀ ಸರೋವರದ ಬಳಿ 2,207 ಮೀ ಎತ್ತರದ ಬೆಟ್ಟ ಶ್ರೇಣಿ ಇದೆ.  eóÁಂಬೀಜೀ ನದಿಯ ಆಚೆ ಉತ್ತರಕ್ಕೆ ಹೋದಂತೆಲ್ಲ ಎತ್ತರದ ಬೆಟ್ಟಗುಡ್ಡ ಸಾಲುಗಳು ಸಿಗುತ್ತವೆ.  ಈ ನದಿಯ ದಕ್ಷಿಣಕ್ಕಿರುವ ಏಕಮಾತ್ರ ಕಡಿದಾದ ಬೆಣಕುಕಲ್ಲಿನ ಬೆಟ್ಟಶ್ರೇಣಿಯ ಶಿಖರ 1,863 ಮೀ ಎತ್ತರವಿದೆ.

	ನದಿಗಳು : ಆಫ್ರಿಕದ ದಕ್ಷಿಣ ಮಧ್ಯಪ್ರಸ್ಥಭೂಮಿಯಿಂದ ಹುಟ್ಟುವ ನದಿಗಳಲ್ಲಿ ಕೆಲವು ಮೊಜಾಂಬಿಕ್ ಮೂಲಕ ಹರಿದು ಮೊಜಾಂಬಿಕ್ ಜಲಸಂಧಿಯಲ್ಲಿ ಹಿಂದೂ ಸಾಗರವನ್ನು ಸೇರುತ್ತವೆ.  eóÁಂಬೀಜೀ ಮೊಜಾಂಬಿಕ್‍ನ ಮುಖ್ಯ ನದಿ.  ಅದು ಜೈರೆ ಮತ್ತು ಅಂಗೋಲಗಳ ಸರಹದ್ದಿನ ಬಳಿ eóÁಂಬಿಯಾದಲ್ಲಿ ಹುಟ್ಟಿ ಪೂರ್ವಾದತ್ತ  ಅಡ್ಡಡ್ಡಲಾಗಿ ಹರಿದು ಸುಮಾರಾಗಿ ಮೊಜಾಂಬಿಕ್‍ನ ಮಧ್ಯಭಾಗದಲ್ಲಿ ಪ್ರವೇಶಿಸಿ ಮೊಜಾಂಬಿಕ್ ಜಲಸಂಧಿಯ ಬಳಿ ಸಮುದ್ರ ಸೇರುತ್ತದೆ.  ಈ ನದಿಯ ಉದ್ದ 2570 ಕಿಮೀ.  ಲೂ ಆನ್ ವಾ, ಸಿರೆ, ಕಾಫುಯೀ ಮತ್ತು ಸಾನ್‍ಯಾಟೀ ಇದರ ಉಪನದಿಗಳು.  eóÁಂಬೀಜೀನದಿ ನೌಕಾಯಾನಕ್ಕೂ ಅನುಕೂಲವಾಗಿದೆ.  ಲಿಪೋಪೊ, ಸೇನ್, ಬುಜಿ, ಲೂರಿಯೊ, ಮೆಸಲು ಮತ್ತು ರೂವೂಮ ಇಲ್ಲಿಯ ಇತರ ನದಿಗಳು.

	ವಾಯುಗುಣ : ಇಲ್ಲಿಯದು ಶುಷ್ಕ ವಾಯುಗುಣ, ಏಪ್ರಿಲ್‍ನಿಂದ ಸಪ್ಟೆಂಬರ್ ತನಕ ಬೇಸಗೆ, ಅಕ್ಟೋಬರ್‍ನಿಂದ ಮಾರ್ಚ್‍ತನಕ ಮಳೆಗಾಲ, ಮಪೂಟೊ ನಗರದಲ್ಲಿ ಜನವರಿಯಲ್ಲಿ 25.60ಅ ಉಷ್ಣತೆಯಿದ್ದರೆ ಜುಲೈನಲ್ಲಿ 18.30ಅಗೆ ಇಳಿದಿರುತ್ತದೆ.  ವಾರ್ಷಿಕ ಸರಾಸರಿ ಮಳೆ 760 ಮಿಮೀ.  ಹಾಗೆಯೇ ಬೇರೆ ನಗರದ ಉಷ್ಣತೆ ಜನವರಿಯಲ್ಲಿ 27.80ಅ ಇದ್ದರೆ ಜುಲೈನಲ್ಲಿ 20.60ಅಗೆ ಇಳಿದಿರುತ್ತದೆ.  ವಾರ್ಷಿಕ ಸರಾಸರಿ ಮಳೆ 1522 ಮಿಮೀ. ಉತ್ತರದಿಂದ ದಕ್ಷಿಣಕ್ಕೆ ಬಂದಹಾಗೆ ಮಳೆಯೂ ಕಡಿಮೆಯಾಗುತ್ತದೆ.

ಸಸ್ಯಸಂಪತ್ತು : ಮೊಜಾಂಬಿಕ್ ಬಹುತೇಕ ಉಷ್ಣವಲಯ ಕಾಡಿನಿಂದ ಮತ್ತು ಸವನ್ನಾ ಹುಲ್ಲುಗಾವಲುಗಳಿಂದ ಕೂಡಿದೆ.  ಮುಖ್ಯ ನದಿಗಳ ಮೇಲೆ ಹರಿವಿನ ಪ್ರದೇಶದಲ್ಲಿ ಮೊಪನೆ ಮರಗಳೂ ಸವನ್ನಾದಲ್ಲಿ ಬೊಬಾಬ್ ಮರಗಳೂ eóÁಂಬೀಜಿûೀಯ ಮುಖಜಭೂಪ್ರದೇಶದಲ್ಲಿ ಮ್ಯಾಂಗ್ರೋವ್ ಮರಗಳೂ ಬೆಳೆಯುತ್ತವೆ ನದಿದಂಡೆಗಳಲ್ಲಿ ಮತ್ತು ಜೌಗುಪ್ರದೇಶದಲ್ಲಿ ಬಂಬು ಮತ್ತು ಚೂಪು ಹುಲ್ಲು ಯಥೇಚ್ಛವಾಗಿ ಬೆಳೆಯುತ್ತವೆ.  ಕಣಿವೆಗಳಲ್ಲಿ ಕರಿಮರ ಮತ್ತು ಎಬೊನಿ  ಮರಗಳನ್ನು ಕಾಣಬಹುದು. ಕಿರಿದಾದ ಕಮರಿಗಳಲ್ಲಿ ನಾಟಾಕ್ಕೆ ಬಳಸುವ ದೊಡ್ಡಮರಗಳು ಬೆಳೆಯುತ್ತವೆ.  ತೀರಪ್ರದೇಶದುದ್ದಕ್ಕೂ ತೆಂಗಿನ ಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ.  ಇವುಗಳ ಜೊತೆಗೆ ಈಚಲು ಮೊದಲಾದ ತಾಳೆಜಾತಿಯ ಮರಗಳಿವೆ.

ಪ್ರಾಣಿ ಸಂಪತ್ತು : ಆಫ್ರಿಕ ಖಂಡದಲ್ಲಿ ಬಹುತೇಕ ಪ್ರಾಣಿಗಳು ಮೊಜಾóಂಬಿಕ್‍ನಲ್ಲೂ ಕಂಡುಬರುತ್ತದೆ.  ಸಿಂಹ, ಜೀಬ್ರ, ಹುಲಿ, ಚಿರತೆ, ತೊಳ, ಆನೆ, ಖಡ್ಗಮೃಗ, ಜಿಂಕೆ, ಕಾಡೆಮ್ಮೆ, ಚಿಗರಿ, ಜಿರಾಫೆ, ಹೇಸರಗತ್ತೆ, ತೋಳ, ನರಿ, ಕಾಡುಬೆಕ್ಕು, ಮುಂಗುಸಿ, ಮಂಗ ಇತ್ಯಾದಿ ಅಸಂಖ್ಯಾತ ಪ್ರಾಣಿವರ್ಗಗಳಿವೆ.  ನದಿಗಳಲ್ಲಿ ನೀರಾನೆ, ನೀರು ನಾಯಿ, ಮೊಸಳೆ, ಮೀನು ಮುಂತಾದವು ಹೆಬ್ಬಾವು, ನಾಗರಹಾವು, ಮಂಡಳದ ಹಾವು ಇತ್ಯಾದಿ ಹಾವುಗಳೂ ಇವೆ.   ಮೀನುಗಾರಿಕೆಗೆ ಒಳ್ಳೆಯ ಸಂಪನ್ಮೂಲವಿದೆ.  ಪ್ಲೆಮಿಂಗೊಮ ಹದ್ದು, ಕೊಕ್ಕರೆ, ಗಿಡುಗ, ಕಾಡುಬಾತು ಇತ್ಯಾದಿ ಪಕ್ಷಿ ಸಂಕುಲವಿದೆ.  ದನ, ಕುರಿ, ಮೇಕೆ, ಹಂದಿ, ಕತ್ತೆ ಮತ್ತು ಕೋಳಿಗಳು ಸಾಕುಪ್ರಾಣಿಗಳು.

ಖನಿಜ ಸಂಪತ್ತು : ಈ ದೇಶದ ಖನಿಜಸಂಪತ್ತಿನ ಸಮಗ್ರ ಸಮೀಕ್ಷೆ ಇನ್ನೂ ಆಗಿಲ್ಲ.  ಸೊಫಾಲದಲ್ಲಿ ಚಿನ್ನ, ಮೊಜಾóಂಬಿಕ್‍ನಲ್ಲಿ ಕಬ್ಬಿಣದ ಅದುರು ಮತ್ತು ದಕ್ಷಿಣ ಆಫ್ರಿಕದ ಸರಹದ್ದಿನಲ್ಲಿ ಮ್ಯಾಂಗನೀಸ್ ನಿಕ್ಷೇಪಗಳಿವೆ.  ಉತ್ತರದ ಮೂರೂರದಲ್ಲಿ ಟ್ಯಾಂಟಲೈಟ್ ಎಂಬ ವಿರಳ ಖನಿಜವಿದೆ.  ಬ್ರಗಾಂಜದಲ್ಲಿ ಚಿನ್ನ, ನಂಪದಲ್ಲಿ ಕಬ್ಬಿಣ ಮತ್ತು ಕ್ಯಾಟುನೆಯಲ್ಲಿ ಮ್ಯಾಂಗನೀಸ್ ಮತ್ತು ಕಲ್ನಾರು ದೊರೆತಿವೆ.  ಪಚ್ಚೆ, ಗ್ರಾಪೈಟ್, ಮೈಕ, ಬಿಸ್‍ವಂತ್ ಮೊದಲಾದ ಲೋಹಗಳು ಸಣ್ಣ ಪ್ರಮಾಣದಲ್ಲಿ ಕಂಡುಬಂದಿದೆ.  ತೀರ ಪ್ರದೇಶದಲ್ಲಿ ತೈಲ ನಿಕ್ಷೇಪಗಳಿವೆ.  ಮಪೂಟೊದ ವಾಯುವ್ಯದಲ್ಲಿ ಸ್ವಾಭಾವಿಕ ಅನಿಲ ದೊರೆತಿದೆ.  ಕಲ್ಲಿದ್ದಲು ನಿಕ್ಷೇಪ ಯಥೇಚ್ಛವಾಗಿ ಕಂಡುಬಂದಿದೆ.

ವ್ಯವಸಾಯ : ವ್ಯವಸಾಯ ಬೆಳೆಗಳು ಇಲ್ಲಿಯ ಮುಖ್ಯ ವಸ್ತುಗಳಾಗಿವೆ.  ಹೊಗೆಸೊಪ್ಪು, ಗೇರುಬೀಜ, ಮತ್ತು ಹತ್ತಿ ಮುಖ್ಯ ಬೆಳೆಗಳು.  ಕಬ್ಬು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪಾದನೆಗಳು ವ್ಯವಸಾಯೋತ್ಪನ್ನದ ಶೇಕಡಾ 10 ರಷ್ಟಿದೆ.  ಎಣ್ಣೆ ಕಾಳುಗಳು, ಜೋಳ, ಟೀ, ಕತ್ತಾಳೆ ನಾರು ಮತ್ತು ಕೊಬ್ಬರಿಗಳನ್ನು ಉತ್ಪಾದಿಸುವರು.  

ಕೈಗಾರಿಕೆ : ಅಪಾರ ಸಂಸ್ಕರಣ ಮತ್ತು ತೈಲ ಶುದ್ಧೀಕರಣ ಇಲ್ಲಿಯ ಮುಖ್ಯ ಕೈಗಾರಿಕೆಗಳಾಗಿವೆ.  ಹತ್ತಿ, ಸಕ್ಕರೆ, ಹೊಗೆಸೊಪ್ಪು, ಗೇರುಬೀಜ ಮತ್ತು ಇತರ ವ್ಯವಸಾಯ ಉತ್ಪನ್ನಗಳನ್ನು ರಫ್ತು ಮಾಡುವ ಮೊದಲು ನಡೆಸುವ ಸಂಸ್ಕರಣ ಕಾರ್ಯದಲ್ಲಿ ತೊಡಗಿವೆ.  ಪಾದರಕ್ಷೆಗಳು, ಸೀಮೆಂಟ್, ರಾಸಾಯನಿಕ ಗೊಬ್ಬರ, ಪಾನೀಯಗಳು ಮತ್ತು ಹತ್ತಿಬಟ್ಟೆ ತಯಾರಿಕೆಗೆ ಸಂಬಂಧಿಸಿದ ಅನೇಕ ಕೈಗಾರಿಕೆಗಳಿವೆ.  ರೈಲು ಮತ್ತು ಹಡಗುಕಟ್ಟೆ ಉದ್ಯಮಗಳು ಬೆಳೆದಿವೆ.

ಗಣಿಗಾರಿಕೆ ವಿಪುಲ ಅವಕಾಶಗಳಿದ್ದರೂ ಅದಿನ್ನೂ ಪ್ರಾರಂಭದ ಸ್ಥಿತಿಯಲ್ಲಿದೆ.  ಸಂಪ ಯೋಜನೆಯಂಥ ಕೆಲವು ಬೃಹತ್ ಯೋಜನೆಗಳು ಕಾರ್ಯಗತವಾಗುತ್ತಿವೆ.  ವಾರ್ಷಿಕವಾಗಿ 2,70,000 ಮೆಟ್ರಿಕ್ ಟನ್‍ಗಳಲ್ಲಿ ಕಲ್ಲಿದ್ದಲು ಉತ್ಪಾದನೆಯಾಗುತ್ತಿದೆ.  ಮೀನುಗಾರಿಗೆ ಗಣನೀಯ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಒದಗಿಸಿದೆ.  ಕೈಗಾರಿಕೆಯಲ್ಲಿ ದೇಶ ಇನ್ನೂ ಪ್ರಾರಂಭದ ಹಂತದಲ್ಲಿದೆ.
ಹಣಕಾಸು : ಇಲ್ಲಿಯ ನಾಣ್ಯ ಎಸ್ಕ್ಯುಡೊ.  ತೂಕ ಮತ್ತು ಅಳತೆಗೆ ಮಿಟ್ರಿಕ್ ಪದ್ಧತಿಯನ್ನು ಬಳಸಲಾಗುತ್ತಿದೆ.  ನೆರೆಯ ದೇಶಗಳಿಗೆ ಸರಕುಸಾಗಣೆ ಮತ್ತು ಬಂದರುಗಳ ಸೌಲಭ್ಯ ಒದಗಿಸಿರುವುದರಿಂದ ಮುಖ್ಯವಾಗಿ ಮೊಜಾóಂಬಿಕ್‍ಗೆ ಆದಾಯ ಬರುತ್ತದೆ.  ಅದರಲ್ಲಿ ರೈಲುಮಾರ್ಗದ ಬಳಕೆ ಮತ್ತು ಬಂದರುಗಳ ಬಳಕೆಗಾಗಿ ದಕ್ಷಿಣ ಆಫ್ರಿಕ ಮತ್ತು ಮಲಾವೀ ದೇಶಗಳು ಅಧಿಕ ಬಾಡಿಗೆ ನೀಡುತ್ತವೆ.  ಮಪೂಟೊ ರಾಜಧಾನಿಯಷ್ಟೇ ಅಲ್ಲದೆ ರಾಷ್ಟ್ರದ ಹಣಕಾಸಿನ ಕೇಂದ್ರವೂ ಆಗಿದೆ.  ಸಾರಿಗೆ ಸಂಪರ್ಕ ವ್ಯವಸ್ಥೆ ಸರ್ಕಾರದ ಸ್ವಾಮ್ಯದಲ್ಲಿದೆ.  ಗಣಿಗಾರಿಕೆ ಹೆಚ್ಚು ಭಾಗ ಖಾಸಗಿಯವರ ಕೈಯಲ್ಲಿದೆ.  ದಕ್ಷಿಣ ಆಫ್ರಿಕ ಮತ್ತು ಜರ್ಮನಿಗಳಿಂದ ಹೆಚ್ಚು ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಸಾರಿಗೆ ಸಂಪರ್ಕ:  ವ್ಯವಸ್ಥೆ ಸಾಕಷ್ಟು ಅಭಿವೃದ್ಧಿಗೊಂಡಿಲ್ಲ.  ಪೋರ್ಚುಗೀಸರು ಆದಾಯದ ದೃಷ್ಟಿಯಿಂದ ನೆರೆಯ ರಾಷ್ಟ್ರಗಳ ಸರಕುಸಾಗಣೆ ವ್ಯವಸ್ಥೆಗೆ ಹೆಚ್ಚು ಮಹತ್ವಕೊಟ್ಟರು.  ಇದರಿಂದ ಅಂತರಿಕಸಾರಿಗೆ ವ್ಯವಸ್ಥೆ ದುರ್ಬಲವಾಗಿದೆ.  ದೇಶದಲ್ಲಿ ಇರುವ ರಸ್ತೆ ಮತ್ತು ರೈಲುಮಾರ್ಗಗಳನ್ನು ದಕ್ಷಿಣದಲ್ಲ ಮಪೂಟೊ, ಮಧ್ಯಭಾಗದಲ್ಲಿ ಬೇರ ಮತ್ತು ಉತ್ತರದಲ್ಲಿ ಮೊಜಾóಂಬಿಕ್ ಬಂದರುಗಳತ್ತ ಕೇಂದ್ರೀಕರಿಸಲಾಗಿದೆ.  ರಸ್ತೆ ವ್ಯವಸ್ಥೆ ಗ್ರಾಮಾಂತರ ಪ್ರದೇಶಗಳಲ್ಲಿ ತುಂಬಾ ಕಳಪೆಯಾಗಿದೆ.  ದೊಡ್ಡ ನಗರಗಳ ಮತ್ತು ಕೈಗಾರಿಕಾ ಕೇಂದ್ರಗಳ ನಡುವೆ ಮಾತ್ರ ಉತ್ತಮ ರಸ್ತೆಗಳಿವೆ.  4,600 ಕಿಮೀ ಉತ್ತಮ ರಸ್ತೆಯೂ ಸೇರಿದಂತೆ ಒಟ್ಟು 26,000 ಕಿಮೀ (1982) ರಸ್ತೆ ಮಾರ್ಗವಿದೆ.  ಇಲ್ಲಿಯ ರೈಲುಮಾರ್ಗ ಮಪೂಟೊ.  ಮೊಜಾóಂಬಿಕ್, ಬೇರ, ಇನ್‍ಯಾಂಬೈನ್ ಮತ್ತು ಕೆಲಮಾನೀ ಎಂಬ ಐದು ಸ್ವತಂತ್ರ ಜಾಲಗಳಿಂದ ಕೂಡಿದೆ.  ದಕ್ಷಿಣ ಆಫ್ರಿಕ, ಸ್ವಾಜಿóಲ್ಯಾಂಡ್, ಜಿóಂಬಾಬ್ವೆ, ಮಲಾವೀ ಇತ್ಯಾದಿ ದೇಶಗಳೊಂದಿಗೆ ಸಂಪರ್ಕ ಹೊಂದಿದ ಅಂತಾರಾಷ್ಟ್ರೀಯ ಜಾಲಗಳಿವೆ.  ದೇಶದ ಒಟ್ಟು ರೈಲುಮಾರ್ಗ 3,690 ಕಿಮೀ (1980).  ಮಪೂಟೊ, ಬೇರ ಮತ್ತು ನಂಪೂಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳೂ.  ಇವಲ್ಲದೆ ಇತರ 16 ವಿಮಾನ ನಿಲ್ದಾಣಗಳಿವೆ. ಆಫ್ರಿಕದ ವಿವಿಧ ದೇಶಗಳಿಗೆ ಮೊಜಾóಂಬಿಕ್‍ನ ಬಂದರುಗಳನ್ನು ಬಳಸುವುದರಿಂದ ಇಲ್ಲಿ ನೌಕಾಸಾರಿಗೆ ಮತ್ತು ಸಾಗಣೆ ಹೆಚ್ಚು ಅಭಿವೃದ್ಧಿಗೊಂಡಿದೆ.  1981 ರಲ್ಲಿ ಎಲ್ಲ ಬಂದರುಗಳಲ್ಲಿ ನಿರ್ವಹಿಸಿದ ಪ್ರಮಾಣ 9,12 ಮಿಲಿಯನ್ ಟನೇಜುಗಳು.  ಮಪೂಟೊ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸ್ವಾಭಾವಿಕ ಬಂದರುಗಳಲ್ಲೊಂದು.  ಬೇರ, ನಕಲ ಮತ್ತು ಕೆಲಮಾನೀ ಇತರ ಬಂದರುಗಳು.

ಸರ್ಕಾರ : 1975 ರಲ್ಲಿ ಮೊಜಾóಂಬಿಕ್ ಸ್ವತಂತ್ರವಾದ ಮೇಲೆ ಅಲ್ಲಿ ಏಕಪಕ್ಷ ಸರ್ಕಾರ ಆಡಳಿತದಲ್ಲಿದೆ.  ಮೂಲತಃ ಮೊಜಾಂಬಿಕ್ ವಿಮೋಚನಾ ರಂಗವೆಂಬ ಸ್ವಾತಂತ್ರ್ಯ ಹೋರಾಟದ ಸಂಘಟನೆಯಿಂದ ಈ ರಾಜಕೀಯಪಕ್ಷ ಉದಿಸಿದೆ.  ಅದು ಸಂಕ್ಷಿಪ್ತವಾಗಿ ಫ್ರೆಲಿಮೊ ಎಂದು ಹೆಸರಾಗಿದೆ.  ಇದನ್ನು ಮತ್ತೆ 1977 ರಲ್ಲಿ ಏಕಮಾತ್ರ ರಾಜಕೀಯ ಪಕ್ಷವಾಗಿ ಪುನರ್ರಚಿಸಲಾಯಿತು.   ಈ ಫ್ರೆಲಿಮೊದ ಅಧ್ಯಕ್ಷರೇ ರಾಷ್ಟ್ರದ ಅಧ್ಯಕ್ಷರಾಗಿರುತ್ತಾರೆ.  ಸರ್ಕಾರದ ಉನ್ನತ ಅಧಿಕಾರಿಗಳು ಪಕ್ಷದ ಕೇಂದ್ರೀಯ ಸಮಿತಿಗೆ ಸೇರಿದ್ದು.  ಈ ಕೇಂದ್ರಿಯ ಸಮಿತಿ 15 ಜನ ಸದಸ್ಯರಿಂದ ಕೂಡಿದೆ.  ಈ ಸಮಿತಿಯನ್ನು ಫ್ರೆಲಿಮೊ ನೇಮಿಸುತ್ತದೆ.  ಈ ಪಕ್ಷವೇ ಮೊಜಾóಂಬಿಕ್  ಶಾಸನಾಂಗವಾದ ಜನತಾ ವಿಧಾನಸಭೆಗೆ 210  ಸದಸ್ಯರನ್ನು ನೇಮಿಸುತ್ತದೆ.  ಈ ಸಭೆ ವರ್ಷಕ್ಕೆ ಎರಡು ಭಾರಿ ಸೇರುತ್ತದೆ.  ಈ ಸಭೆ ಸೇರದ ಮಧ್ಯಂತರ ಅವಧಿಯಲ್ಲಿ ಅದರ ಖಾಯಂ ಸಮಿತಿ ಶಾಸನ ವಿಷಯಗಳನ್ನು ನಿರ್ವಹಿಸುತ್ತದೆ.  ಮೊಜಾಂಬಿಕ್‍ನ ಅಧಿಕೃತ ಭಾಷೆ ಪೋರ್ಚುಗೀಸ, ಎಲ್ಲ ಹಂತಗಳಲ್ಲೂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.  ಮೊಜಾóಂಬಿಕ್‍ನ್ನು ಆಡಳಿತಾನುಕೂಲಕ್ಕೆ ಹತ್ತು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿದೆ.

ಶಿಕ್ಷಣ :  ಮೊಜಾóಂಬಿಕ್ ಮುಖ್ಯವಾಗಿ ಕರಿಯರ ನಾಡು.  ಇವರು ಬಹುತೇಕ ಬಂಟು ಭಾಷಾಗುಂಪಿಗೆ ಸೇರಿದ ಆಡು ನುಡಿಗಳನ್ನು ಬಳಸುತ್ತಾರೆ.  ಸ್ವಾಹಿಲೆ ಸಂಪರ್ಕ ಭಾಷೆಯಾಗಿ ಬಳಕೆಯಾಗುತ್ತಿದೆ.  ದೇಶೀಯರಲ್ಲಿ ಶೇಕಡಾ 60 ಮಂದಿ ಪಾರಂಪರಿಕ ಆಫ್ರಿಕನ್ ಧರ್ಮವನ್ನು  ಆಚರಿಸುತ್ತಾರೆ.  ಈ ಧರ್ಮದ ಮುಖ್ಯ ತಿರುಳು ಸರ್ವ ಚೇತನ ಸಿದ್ಧಾಂತ.  ಉಳಿದವರಲ್ಲಿ ಶೇಕಡಾ 34 ಭಾಗ ರೋಮನ್ ಕ್ಯಾಥೋಲಿಕ್ ಅಥವಾ ಇಸ್ಲಾಮ್ ಧರ್ಮಾನುಯಾಯಿಗಳಾಗಿದ್ದಾರೆ.  1975 ರಲ್ಲಿ ದೇಶ ಸ್ವತಂತ್ರವಾದಾಗ ಬಹುತೇಕ ಪೋರ್ಚುಗೀಸರು ಮೊಜಾóಂಬಿಕನ್ನು ತೊರೆದರು.  ಉಳಿದವರೆಲ್ಲ ಅರಬ್ಬರು ಮತ್ತು ಭಾರತೀಯರು ಅಲ್ಪಸಂಖ್ಯಾತರಾಗಿದ್ದು ತೀರಪ್ರದೇಶದ ಪಟ್ಟಣಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ.  ಮಪುಟೊದಲ್ಲಿ 1962 ರಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.  ಪ್ರಾಥಮಿಕ ಶಾಲೆಗಳಲ್ಲಿ 1,37,865; ಸೆಕೆಂಡರಿ ಶಾಲೆಗಳಲ್ಲಿ 135,958 (1981) ವಿದ್ಯಾರ್ಥಿಗಳಿದ್ದರು.  ಇಲ್ಲಿ 321  ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳಿವೆ.

ಇತಿಹಾಸ : ಪ್ರಾಚೀನಕಾಲದಿಂದಲೂ ಅರಬ್ಬರ ಮತ್ತು ಭಾರತೀಯರ ಕೋಠಿಗಳು ತೀರಪ್ರದೇಶದಲ್ಲಿ ಇದ್ದವಾದರೂ ಅವರಾರೂ ಒಳನಾಡಿಗೆ ಪ್ರವೇಶಿಸಿರಲಿಲ್ಲ.  1498 ರಲ್ಲಿ ಮಾರ್ಚ್ 2ರಂದು ವಾಸ್ಕೋಡಗಾಮ ಮೊಜಾóಂಬಿಕ್ ದ್ವೀಪಕ್ಕೆ ಭೇಟಿ ನೀಡಿದ.  1506 ರಲ್ಲಿ ಸೊಫಾಲವನ್ನು ಪೋರ್ಚುಗೀಸರು ವಶಪಡಿಸಿಕೊಂಡರು.  ಅಲ್ಲಿಂದ ಮುಂದೆ ಕ್ರಮೇಣ ಈ ಪ್ರದೇಶ ಪೋರ್ಚುಗೀಸರು ಅಧೀನಕ್ಕೊಳಪಟ್ಟಿತು.  ಪಾರಂಭದಲ್ಲಿ ಇದನ್ನು ಪೋರ್ಚುಗೀಸ್ ಇಂಡಿಯಾದ ಭಾಗವಾಗಿ ಆಳಲಾಗುತ್ತಿತ್ತು.  1752 ರಲ್ಲಿ ಪ್ರತ್ಯೇಕ ಆಡಳಿತಕ್ಕೆ ಒಳಪಡಿಸಲಾಯಿತು.  1951 ರಲ್ಲಿ ಮೊಜಾóಂಬಿಕ್ ಪೋರ್ಚುಗಲ್‍ನ  ಸಾಗರೋತ್ತರ ಪ್ರಾಂತ್ಯವಾಗಿ ಪರಿಗಣಿಸಲಾಯಿತು.

ಮೊಜಾóಂಬಿಕ್ ಪೋರ್ಚುಗೀಸರ ಆಡಳಿತದಲ್ಲಿ ಪಾಶ್ಚಾತ್ಯ ಜೀವನ ಶೈಲಿ ಮತ್ತು ಭಾಷೆಯ ಪ್ರಭಾವಕ್ಕೊಳಗಾಯಿತು.  ಆದರೆ ಈ ಸುದೀರ್ಘ ಶತಮಾನಗಳಲ್ಲಿ ಅಲ್ಲಿಯ ಜನಜೀವನದ ಸ್ಥಿತಿ ಉತ್ತಮಗೊಳ್ಳಲಿಲ್ಲ.  ಪೋರ್ಚುಗಲ್ ಈ ದೇಶದಿಂದ ತನಗೆ ಬರಬಹುದಾದ ಗರಿಷ್ಠ ಆದಾಯದ ಮೇಲೆ ನಿಗಾ ಇಟ್ಟಿತ್ತು.  ಇದರಿಂದ ಇಲ್ಲಿ ಗಣಿಗಳು, ರೈಲುಮಾರ್ಗಗಳಷ್ಟೇ ನಿಮಾಣವಾದುವು.  ದೇಶೀಯರ ಹೀನಸ್ಥಿತಿಯಲ್ಲಿದ್ದುವು.  ಮುಂದಿನ ಸ್ವಾತಂತ್ರ್ಯ ಹೋರಾಟ 1950 ರ ದಶಕದಲ್ಲಿ ಗೆರಿಲ್ಲಾ ಯುದ್ಧವಾಗಿ ತಿರುಗಿತು.

1960 ರಲ್ಲಿ ಮೊಜಾóಂಬಿಕ್ ವಿಮೋಚನಾ ಹೊರಾಟರಂಗದ ಸ್ಥಾಪನೆಯಾಯಿತು.  1964 ರಿಂದ ಘರ್ಷಣೆಗಳು ತೀವ್ರಗೊಂಡವು.  ವಿಮೋಚನಾ ಹೋರಾಟಗಾರರು ಉತ್ತರ ಮೊಜಾóಂಬಿಕ್‍ನ ಅನೇಕ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿದರು.  ಒಂದು ದಶಕದ ಹೋರಾಟದ ಬಳಿಕ ಪೋರ್ಚುಗಲ್ 1974 ರಲ್ಲಿ ಮೊಜಾóಂಬಿಕ್ ಸ್ವಾತಂತ್ರ್ಯ ಪಡೆಯಿತು.  ದೇಶದ ಆಡಳಿತವನ್ನು ಫ್ರೆಲಿಮೊ ವಹಿಸಿಕೊಂಡಿತು.   1975 ಸೆಪ್ಟೆಂಬರ್ 16ರಂದು ಮೊಜಾóಂಬಿಕ್ ಗಣರಾಜ್ಯ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಸೇರಿತು.								            		         
(ಡಿ. ಎಸ್. ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ